Tumgik
aakrutikannada · 6 hours
Text
'ಸಂಸಾರ ಗೋಳು' ಕವನ - ಪ್ರೊ.ಸಿದ್ದು ಸಾವಳಸಂಗ
ಸಾಕು ಸಾಕು ದೇವರೆ, ಮಾನವ ಈ ಜನ್ಮ ! ಪಕ್ಷಿಯಾಗಿ ಹುಟ್ಟಿಸು, ಮುಂದಿನ ನನ್ನ ಜನ್ಮ !!…ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಪ್ರೊ.ಸಿದ್ದು ಸಾವಳಸಂಗ ಅವರ ಕವನವನ್ನು ತಪ್ಪದೆ ಮುಂದೆ ಓದಿ…. ದಿನ ನಿತ್ಯ ಬರೀಗೋಳು ಯಾಕೆ ಬೇಕು ಈ ಬಾಳು ! ಹಣವಿಲ್ಲದ ಬದುಕು ನೀರಿಲ್ಲದ ಒಣಗಿದ ಮೀನು !! ಸಂಸಾರ ಸಾಗಿಸಲು ಬಲು ಕಷ್ಟ ಕಾರ್ಪಣ್ಯ ! ಎಷ್ಟು ದುಡಿದರು ಸಾಲಲಾರದು ನಾಣ್ಯ !! ಶಾಲೆ-ಕಾಲೇಜು ಫೀಸು ತುಂಬಿ ಖಾಲಿಯಾಯಿತು ಜೇಬು ! ಮಕ್ಕಳಿಗೆ ಹೆಸರಿಗಷ್ಟೆ ಅದು ದೊಡ್ಡ ಕಾಲೇಜು !! ಹೆಂಡತಿಗೆ…
Tumblr media
View On WordPress
0 notes
aakrutikannada · 9 hours
Text
‘ಚೌಚೌ ಬಾತ್’ ಅಂಕಣ (ಭಾಗ – ೨೬)
‘ದೆಹಲಿಯ ಸುತ್ತಮುತ್ತ’ ನೋಡಲು ಮೈಸೂರಿನಿಂದ ಟ್ರೈನ್ ನಲ್ಲಿ ಪ್ರಯಾಣ ಬೆಳೆಸಿದೆವು. ಅದೇ ನನ್ನ ಮೊದಲ ಬಾರಿಗೆ ರೈಲು ಪ್ರಯಾಣದ ಅನುಭವ. ಬಸ್ ಗಿಂತ ಕಂಫರ್ಟ್ ಇತ್ತು. ಮುಖ್ಯವಾಗಿ ಶೌಚಾಲಯದ ವ್ಯವಸ್ಥೆ ಇತ್ತು. ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ದೆಹಲಿಯ ಸುತ್ತಮುತ್ತ’, ತಪ್ಪದೆ ಮುಂದೆ ಓದಿ … ಹತ್ತಾರು ವರ್ಷಗಳ ಹಿಂದೆ ಮೈಸೂರಿನಲ್ಲಿ ಹಿಂದಿ ಬಿ.ಎಡ್ ಮಾಡುತ್ತಿದ್ದಾಗ ಅಕ್ಟೋಬರ್ ತಿಂಗಳಿನಲ್ಲಿ ಕಾಲೇಜಿನವತಿಯಿಂದ ಆಗ್ರಾಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಮಗಾಗಿ ಒಂದು ತಿಂಗಳ…
Tumblr media
View On WordPress
0 notes
aakrutikannada · 10 hours
Text
'ಕಿಚನ್ ಕವಿತೆಗಳು' ಕೃತಿ ಪರಿಚಯ
ಭಾರತಿ ಬಿ. ವಿ ಅವರ ‘ಕಿಚನ್ ಕವಿತೆಗಳು’ ಎಂದಾಗ ಅಡಿಗೆ ಮನೆಗೆ ಸಂಬಂಧಿಸಿದ ಕವಿತೆಗಳಿರಬಹುದು ಎಂಬ ನಿರೀಕ್ಷೆ ಇರುತ್ತದೆ. ಜೀವನದ ಸರಳ ವಿಚಾರಗಳನ್ನು ಅಡುಗೆ ಮನೆಗೆ ತಳುಕು ಹಾಕುವ ಚಂದದ ಪ್ರಯತ್ನವಾಗಿದ್ದು, ಕವನ ಸಂಕಲನದ ಕುರಿತು ವಿಭಾ ವಿಶ್ವನಾಥ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… ಪುಸ್ತಕದ ಶೀರ್ಷಿಕೆ : ಕಿಚನ್ ಕವಿತೆಗಳು ಲೇಖಕರು : ಭಾರತಿ ಬಿ. ವಿ ಪ್ರಕಾಶಕರು : ಬಹುರೂಪಿ ಪುಟಗಳು : 40 ಬೆಲೆ : 30 ರೂ. ‘ಕಿಚನ್ ಕವಿತೆ’ಗಳು ಎಂದಾಗ ಅಡಿಗೆ ಮನೆಗೆ…
Tumblr media
View On WordPress
0 notes
aakrutikannada · 14 hours
Text
'ದೇವರು' ಕವನ - ಪದ್ಮಶ್ರೀ ಗೋವಿಂದರಾಜ್
ಒಮ್ಮೆ ಅವತರಿಸು ದೇವನೇ, ನಿನ್ನ ಬತ್ತಳಿಕೆಯ ಈಟಿಯ ಈ ವಿಷ ಜಂತುಗಳ ಕುತ್ತಿಗೆಯಲಿ ನಾಟಿಸು…ಪದ್ಮಶ್ರೀ ಗೋವಿಂದರಾಜ್ ಅವರ ರಚನೆಯ ಕವನವನ್ನು ಪ್ರಕಟಿಸುವುದರ ಮೂಲಕ ಆಕೃತಿಕನ್ನಡ ಪದ್ಮಶ್ರೀ ಅವರಿಗೆ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರುತ್ತದೆ. ದೇವರೇ… ಈ ರಾಕ್ಷಸರು ವಾರಕೊಂದು ಬಾಡೂಟದಂತೆ ಹೆಣ್ಣ ಕೊಂದು ಚೂರಿಯ ದಾಹಕೆ ನೆತ್ತರ ಕುಡಿಸುವರು ಬಣ್ಣ ಬಣ್ಣದ ಕನಸುಗಳ ಹೆಣಿದು ಬಿಗಿಯಾದ ರಿಬ್ಬನ್ ಕಟ್ಟಿ ಶಾಲೆ ಹೊರಟವಳು ಅವಳು ಚಿಗುರು ಮೋಹಕ ಮೈ ಮಾಟ, ಮನಮೋಹಕ ಕಂಗಳಲಿ ಮಿಂಚಿನ ತುಂಟಾಟ, ಮೊದಲ ಮಳೆಯ…
Tumblr media
View On WordPress
0 notes
aakrutikannada · 1 day
Text
ಮೌನದ ಸಂವೇದನೆ
ಸಿಡಿದಿದೆ ಜ್ವಾಲೆಯ ಕಣ ಅಧರ್ಮದ ಆಕೃತಿಗೆ ಧರ್ಮದ ಕರ್ಮಕ್ಕೆ ಸಲಾಕೆಗಳು ಸಿಡಿದೆದ್ದಿವೆ. ಆಶ್ವಾಸನೆಯ ಆಹಾಕಾರಕ್ಕೆ ಹಾರ ತಲೆ ಬಾಗಿದೆ. ಕಪ್ಪು ಶಾಹಿಯು ಕ್ರಾಂತಿಯ ಭಾಷಣಕ್ಕೆ ಸುತ್ತಿಗೆ ಕುಡುಗೋಲ ಸಾಂಕೇತಿಕತೆಗೆ ಹಾದಿಯ ಎಚ್ಚರಿಸುತ್ತಿದೆ.- ಡಾ. ಕೃಷ್ಣವೇಣಿ. ಆರ್.ಗೌಡ, ತಪ್ಪದೆ ಮುಂದೆ ಓದಿ… ಮೌನ ಭಾವನೆಯ ನಿಲುವಿನಲಿ ಸಿಡಿದೇಳುತ್ತಿದೆ ಹೋರಾಟದ ಬಿಸಿ ಉಸಿರು. ತಿವಿದ ಮಾತಿಗೆ ಮನದ ಉದ್ಘಾರ ಓಡುತ್ತಿದೆ. ಸೂಟು ಬೂಟಿನ ಸಮಯ ಪ್ರಜ್ಞೆಯ ಬೆವರಿಗೆ ಸೋತ ನೋಟ ಸುಡುಗಾಡ ಶಿಲುಬೆಯ ಚಿನ್ಹೆ ಹೇಳ…
Tumblr media
View On WordPress
0 notes
aakrutikannada · 2 days
Text
ಇಷ್ಟವಾದ ಪುಸ್ತಕ "ಸಂಕ್ರಾಂತಿ" - ಅಬ್ಬೂರು ಪ್ರಕಾಶ
ಸ್ವರ್ಣಲತ ಎ.ಎಲ್ ಅವರ “ಸಂಕ್ರಾಂತಿ” ಪುಸ್ತಕದಲ್ಲಿ 252 ಪುಟಗಳಿದ್ದು, ಇಡೀ ಸಮಾಜದಲ್ಲಿಯೇ ಕಂಡುಬರುವ ಮೌಲ್ಯಗಳ ಕುಸಿತ ಇಲ್ಲಿಯೂ ಇದೆ. ಇದಕ್ಕೆ ಹಳ್ಳಿ ಪಟ್ಟಣ ಎಂಬ ಬೇಧ ಭಾವ ಇಲ್ಲ. ಅಬ್ಬೂರು ಪ್ರಕಾಶ ಅವರು ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… ” ಸಂಕ್ರಾಂತಿ “, ಇದು ದಿಲ್ಲಿಯಿಂದ ಹಳ್ಳಿಗೆ ಸಾಗಿದ ಬದುಕಿನ ಕತೆ. ತಮ್ಮ ಮುಖ ಪುಸ್ತಕದ ಬರಹಗಳ ಮೂಲಕ ಪರಿಚಿತರಾಗಿರುವ ಸ್ವರ್ಣಲತ ಎ.ಎಲ್ ಅವರ ಎರಡನೇ ಪುಸ್ತಕ. ಇವರ ಮುಖ ಪುಸ್ತಕದ ಬರಹಗಳನ್ನೇ…
Tumblr media
View On WordPress
0 notes
aakrutikannada · 2 days
Text
'ಹಳ್ಳಿ ದೇವಪ್ಪ' ಸಣ್ಣ ಕಥೆ
ಅಪ್ಪನ ಜೊತೆ ಮಗಳ ವಯಸ್ಸಿನ ಹುಡುಗಿ ನೋಡಿ ಮೂರೂ ಗಂಡು ಮಕ್ಕಳಿಗೆ ಸಿಟ್ಟು ಬಂತು. ಸೀದಾ ಅಪ್ಪನ ಹತ್ರ ಹೋಗಿ ಆಕೆ ಯಾರು? ಎಂದು ಪ್ರಶ್ನಿಸಿದರು. ಅದಕ್ಕೆ ಅಪ್ಪ ಏನೆಂದು ಹೇಳಿದ ಸವಿತಾ ಮುದ್ಗಲ್ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ… ಇಡಿ ಊರಿಗೆ ದೇವಪ್ಪನೆಂದರೆ ಮರ್ಯಾದೆಯಿಂದ ಕೈ ಮುಗಿದು ನಮಿಸುವ ಜನರು ಕಾಲ ಕಳೆದಂತೆ ಆತನಿಗೆ ಸ್ವಲ್ಪವು ಗೌರವ ನೀಡದೇ ಮಾರಿಗೆ ಹೊಡೆದಂಗೆ ಮಾತಾಡಲು ಶುರು ಮಾಡುತ್ತಾರೆ. ಇವನು ಮಾಡಿದ ಅಂತಹ ತಪ್ಪಾದರೂ ಏನಿರುತ್ತೆ ಅಂದು ತಿಳಿದುಕೊಳ್ಳುವ ಕುತೂಹಲ ಅವರ…
Tumblr media
View On WordPress
0 notes
aakrutikannada · 2 days
Text
ಚುಕ್ಕಿಸಾರು ಅಥವಾ ಹುಣಸೆಗೊಜ್ಜು ಎಂಬ ದಿವ್ಯಾಮೃತ
ಜಿಟಿಜಿಟಿ ಮಳೆ ಮಧ್ಯೆ ಊಟಕ್ಕೆ ಸ್ಟ್ರಾಂಗ್ ಗೊಜ್ಜು ಇದ್ರೆ ಊಟದ ಗಮ್ಮತ್ತೇ ಬೇರೆ. ಕೆ.ರಾಜಕುಮಾರ್ ಅವರು ಹುಣಸೆಹಣ್ಣಿನ ಗೊಜ್ಜನ್ನು ಮಾಡುವ ವಿಧಾನ ಮತ್ತು ಅದರ ರುಚಿಯ ಗಮ್ಮತ್ತಿನ ಕುರಿತು ಆಹಾರ ಪ್ರಿಯರಿಗೆ ತಿಳಿಸಿಕೊಟ್ಟಿದ್ದಾರೆ, ತಪ್ಪದೆ ನೀವು ಮಾಡಿ ರುಚಿ ನೋಡಿ… ಬಾಯಿ ಕೆಟ್ಟಿದೆಯೆ? ಊಟ ಸೇರುತ್ತಿಲ್ಲವೆ? ಮೃಷ್ಟಾನ್ನ ತಿಂದು ಬೇಸರವೆ? ತರಕಾರಿ ಇಲ್ಲವೆ? ಜಿಟಿಜಿಟಿ ಮಳೆಯೆ? ಹಾಗಾಗಿ ನಾಲಿಗೆ ಚುರ್ ಎನಿಸುವ ದೇಸಿ ಸಾರು ಬೇಕು ಎನಿಸುತ್ತಿದೆಯೆ? ಸಾರು ಕಡಿಮೆ ಇದೆಯೆಂಬ ಕಾರಣಕ್ಕೆ…
Tumblr media
View On WordPress
0 notes
aakrutikannada · 2 days
Text
ಡಾ.ಟಿ.ತ್ಯಾಗರಾಜು ಅವರ ಕವನಗಳ ಗುಚ್ಚು
ಡಾ. ಟಿ ತ್ಯಾಗರಾಜು ಅವರ ರಚನೆಯ ಕವನವನ್ನು ಪ್ರಕಟಿಸುವುದರ ಮೂಲಕ ಅವರಿಗೆ ಆಕೃತಿಕನ್ನಡ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರುತ್ತದೆ, ತಪ್ಪದೆ ಮುಂದೆ ಓದಿ… ಮರೆಯದಿರು ಮನೆತನವ… ಹೆತ್ತವರೊಂದೆಡೆ ಮಕ್ಕಳೊಂದೆಡೆ ಇದ್ದರೆ ಯಾರಿಗೆ ಹಿತವಯ್ಯ.. ಅವರಿಗೂ ತಳಮಳ ನಿಮಗೂ ತಳಮಳ ಕಳವಳ ನಿಜವಿದಕಯ್ಯ.. ಭಾವನಾತ್ಮಕ ಸಂಬಂಧವು ಜೊತೆ ಇದ್ದೊಡೆ ಅಂದವಯ್ಯ. ಹಗಲಿರುಳು ಯೋಚನೆಗಳು ಬೆಂಬಿಡ್ದೆ ನೋಯ್ಸುವ್ದು ಬೇಕೇನಯ್ಯ… ಕಾಲಚಕ್ರದ ಬೊಂಬೆಗಳು ನಾವು ಎದುರಿದ್ದಡೆ ಸಂತಸ ನೂರ್ಮಡಿಸುವುದಯ್ಯ.. ವಯಸ್ಸಾದ ಜೀವಗಳಿಗೆ…
Tumblr media
View On WordPress
0 notes
aakrutikannada · 2 days
Text
'ನಯನ ಕಾಂತಿ' ಕವನ - ವೀಣಾ ಶಂಕರ್
ನಗುಮೊಗದ ಕವಿಯತ್ರಿ ವೀಣಾ ಶಂಕರ್ ಅವರ ಒಂದು ಕವಿತೆಯನ್ನು ಪ್ರಕಟಿಸುವುದರ ಮೂಲಕ ಅವರ ಹುಟ್ಟುಹಬ್ಬಕ್ಕೆ ಆಕೃತಿಕನ್ನಡ ಶುಭಕೋರುತ್ತದೆ,ತಪ್ಪದೆ ಮುಂದೆ ಓದಿ… ನೀನು ವೀಣೆ ನಾನು ತಂತಿ ನುಡಿಸು ಪ್ರೇಮ ನಾದವ ನಿನ್ನ ನಯನ ಕಾಂತಿ ಇಳಿಸಿತು ಮನದ ಭಾರವ ಸುಪ್ತಮನದಿ ಮಧುರವಾಗಿ ಸಣ್ಣನೆ ಸುಳಿವ ಗಾಯನ ತಪ್ತ ಮನಕೆ ಜೊತೆಯಾಗಿ ಒಲವ ನಲಿವ ಚೇತನ ನನ್ನ ಕಣ್ಣ ಕಾಂತಿಯಲ್ಲು ನಿನ್ನ ಮುಖವೇ ಕಂಡಿದೆ ನಾನು ಪಡೆದ ಪ್ರೀತಿಗಿಂದು ಮನವು ಇಲ್ಲಿ ತಣಿದಿದೆ ತಿಳಿಯದಂತ ತುಡಿತದಲ್ಲೂ ಸೆಳೆಯುವಂತ ಕಲೆಯಿದೆ ನನ್ನ ಮನದಿ…
Tumblr media
View On WordPress
0 notes
aakrutikannada · 2 days
Text
ನನ್ನ ಕೃತಿಗೆ ನನ್ನದೇ ಮುನ್ನುಡಿ !!!
‘ಸಾಹಿತಿಯಾದವನು ಯಾವೊತ್ತೂ ಪ್ರಭುತ್ವದ ಅಂಕುಡೊಂಕುಗಳನ್ನು ಗಮನಿಸಿ ಅವುಗಳ ಸರಿ ತಪ್ಪುಗಳ ಬಗ್ಗೆ ಬರೆಯುತ್ತಾ ಹೋಗಬೇಕು. ನಾನಂತೂ ಇದನ್ನು ಪಾಲಿಸಿರುವೆನೆಂಬ ಆತ್ಮ ಸಂತೃಪ್ತಿ ಇದೆ.ಎಷ್ಟೋ ಸಾರಿ ಅನೇಕ ಗೆಳೆಯರು, ಓದುಗರು ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡೂ ಹೀಗೆ ಬರೆಯುತ್ತೀರಲ್ಲ, ಸೇವೆಯಿಂದ ಅಮಾನತು ಮಾಡಿದರೆ ಏನು ಮಾಡ್ತೀರಿ ಎಂದು ಕೇಳಿದ್ದುಂಟು !’ ಕೇಶವರೆಡ್ಡಿ ಹಂದ್ರಾಳ ಅವರ ಹೊಸ ಕೃತಿ ಕುರಿತು ಅವರದೇ ಮಾತು. ಪುಸ್ತಕ : ಕಾಕ್ಟೇಲ್ ಲೇಖಕರು : ಕೇಶವರೆಡ್ಡಿ ಹಂದ್ರಾಳ ಪ್ರಕಾಶನ : ಕಠೀರವ…
Tumblr media
View On WordPress
0 notes
aakrutikannada · 2 days
Text
'ಮಳೆ ಸಿಂಚನ' ಕವನ - ಶಿವದೇವಿ ಅವನೀಶಚಂದ್ರ
‘ಮಳೆಯನ್ನು ನಿಂದಿಸಬೇಡ ಗೆಳತಿ, ನಮ್ಮಿಬ್ಬರನ್ನು ಒಂದೇ ಕೊಡೆಯಲ್ಲಿರಿಸೋದಕ್ಕೆ ಬೇಕು ಅದರ ಪ್ರೀತಿ’…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಈ ಲೇಖನಿಯಲ್ಲಿ ಅರಳಿದ ಮಳೆ ಸಿಂಚನವನ್ನು ತಪ್ಪದೆ ಮುಂದೆ ಓದಿ… ಪರಿಮಳದ ಜಾಡು ಹಿಡಿದು ಹೋದಾಗ ದಕ್ಕಿಸಿಕೊಳ್ಳಲು ಮೈತುಂಬಾ ಮುಳ್ಳುಗಳು ಮೈಯ ತರಚಿದ ಗಾಯಗಳ ನೆತ್ತರು ಅದು ತಾನು ಜಾಜಿ ಎಂದು ಸಾಬೀತುಪಡಿಸಿದಾಗ ಆಸ್ವಾದದ ಅಮಲು ಇಳಿದಿತ್ತು * ಹಣ್ಣಿಲ್ಲವೆಂದು ಹೊಂಗೆಯ ಅವಗಣಿಸಿದ್ದೆ ಅದೇ ಕೊನೆಗೆ ಬಿರು ಬೇಸಿಗೆಯಲ್ಲಿ ತಂಗಾಳಿ ಜಳಕದಲಿ‌‌ ನನ್ನ…
Tumblr media
View On WordPress
0 notes
aakrutikannada · 3 days
Text
ನಿಸ್ವಾರ್ಥ ಬದುಕಿಗೆ ಆದರ್ಶ ವ್ಯಕ್ತಿ
ನಾನು ನನ್ನದು ಎನ್ನುವ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥವಾಗಿ ಬದುಕುವ ವ್ಯಕ್ತಿಗಳನ್ನು ನೋಡುವುದು ಅಪರೂಪ. ಯಾವುದೇ ಫಲಾಪೇಕ್ಷೆಯಿಲ್ಲದೆ ಮನೆ ಹತ್ತಿರದ ಪಾರ್ಕ್ ನಲ್ಲಿ ಗಿಡ ನೆಟ್ಟು ಸಂಭ್ರಮಿಸುವ ನಿವೃತ್ತ ಕೆಪಿಸಿಎಲ್ ಉದ್ಯೋಗಿ ಅಪರಂಜಿ ಅವರು ಎಲ್ಲರಿಗಿಂತ ಭಿನ್ನ ವ್ಯಕ್ತಿ… ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ । ಹೊಂದಿರವರವರಹಂತೆಯು ಮೊಳೆಯುವನಕ ।। ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ । ಬಂಧ ಮುರಿವುದು ಬಳಿಕ ಮಂಕುತಿಮ್ಮ ।। ಎಷ್ಟೊಂದು ಪ್ರೀತಿ ಬಾಂಧವ್ಯ ಇರುವಂಥ ತಂದೆ…
Tumblr media
View On WordPress
0 notes
aakrutikannada · 3 days
Text
ಮಾನಸ….ಇದು ಮನಸಿನ ಮಾತು (ಭಾಗ-೯)
ಎಲ್ಲರ ಬಳಿ ನಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿದಾಗ ಅವರಿಗೆ ನಮ್ಮನ್ನು ನೋಡಿ ಹಾಸ್ಯ ಎನಿಸಬಹುದು, ಇಲ್ಲವೇ ಆಡಿಕೊಂಡು ಅವಮಾನ ಮಾಡ���ಹುದು. ಇದೆಲ್ಲಾ ಮೆಟ್ಟಿ ನಿಲ್ಲಲು ಒಂದು state of mind ಬೇಕು.ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಮನಸು ಎನ್ನುವುದು ಬಹಳ ಆಳವಾದ ನಿಗೂಢ ಜಗತ್ತು’, ತಪ್ಪದೆ ಮುಂದೆ ಓದಿ… ತನ್ನ ತಾ ಅರಿಯದೆ ಬೇರೆಯವರ ಮನಸನ್ನು ತಿಳಿಯಲು ಅಸಾಧ್ಯ. ಅರಿಯಲು ಆಗದ ಊಹೆಗೂ ನಿಲುಕದ್ದು ಮನಸ್ಸು. ನಾನು ಎನ್ನುವುದನ್ನು ಬೆಳೆಸಿಕೊಂಡಾಗ…
Tumblr media
View On WordPress
0 notes
aakrutikannada · 3 days
Text
ಅವನು ಎಲ್ಲಿದ್ದಾನೆ - ರೂಮಿ
ನೀನು ತುಂಬಾ ಶ್ರದ್ಧೆಯಿಂದ ಜಪಿಸುತ್ತಿದೆ. ಪ್ರತಿಫಲ ಮಾತ್ರ ಇಲ್ಲ! ಎಂದು ಸೂಫಿ ಸಂತನಿಗೆ ಶೈತಾನ ಹೇಳಿದಾಗ ಏನಾಯಿತು?… ಇಮ್ತಿಯಾಜ್ ಖಾನ್ ಅವರ ಇಂಗ್ಲಿಷ್ ನಿಂದ ಅನುವಾದ ಮಾಡಿದ ಈ ಕತೆಯನ್ನು ತಪ್ಪದೆ ಓದಿ… ರಾತ್ರಿಯಿಡೀ ಒಬ್ಬ ಸೂಫಿ ಸಂತನು, ತುಟಿಗಳು ಸೀಳಿ ರಕ್ತಸ್ರಾವವಾಗುವವರೆಗೆ “ಅಲ್ಲಾಹು, ಅಲ್ಲಾಹು ಎಂದು ಜಪಿಸುತ್ತ ತನ್ನ ದೈವವನ್ನು ಕರೆದನು. ಅವನಿಗೆ ಉತ್ತರ ಸಿಗಲಿಲ್ಲ. ಆಗಲೇ ಅರ್ಧ ರಾತ್ರಿ ಕಳೆದಿತ್ತು. ರಾತ್ರಿಯ ಕೊನೆಯ ಪಹರೆಯೂ ಅಂತ್ಯವಾಗುತ್ತಿತ್ತು. ಸಮಯ ಸಾಧಕ ಶೈತಾನನು ಆಗ…
Tumblr media
View On WordPress
0 notes
aakrutikannada · 3 days
Text
ಡ್ರೈ ಫ್ರೂಟ್ಸ್ ಸ್ಮೂಥಿ - ಶಕುಂತಲಾ ಸವಿ
ಡ್ರೈ ಫ್ರೂಟ್ಸ್ ಹಾಗೂ ಫ್ರೂಟ್ಸ್ ಗಳಿಂದ ರುಚಿಕರವಾದ ಸ್ಮೂಥಿ. ಮಾಡಬಹುದು. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…   ಬೇಕಾಗುವ ಪದಾರ್ಥಗಳು : ಬಾಳೆಹಣ್ಣು 1 ಖರ್ಜೂರ 4 ಬಾದಾಮಿ 10 ಗೋಡಂಬಿ 10 ದ್ರಾಕ್ಷಿ 15 ಪಾಲಕ್ ಎಲೆ 2 ಮೊಸರು ಒಂದು ಕಪ್ ಕಾಮ ಕಸ್ತೂರಿ ಬೀಜಗಳು ನೆನೆಸಿದ್ದು 1 ಜಾಮೂನ್ ಕಪ್ ಕಲ್ಲಂಗಡಿ ಹಣ್ಣಿನ ಬೀಜ ಸ್ವಲ್ಪ ಮಾಡುವ ವಿಧಾನ : ಡ್ರೈ ಫ್ರೂಟ್ಸ್ ಗಳನ್ನು ರಾತ್ರಿಯೇ ನೆನೆಸಿಡಬೇಕು. ಮಿಕ್ಸಿ ಜಾರಿಗೆ…
Tumblr media
View On WordPress
0 notes
aakrutikannada · 3 days
Text
ನೇರಳೆ ಹಣ್ಣಿನ ಮಹತ್ವ
ನೇರಳೆ ಎಲೆಯ ರಸತೆಗೆದು ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತದೆ. ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು ನೇರಳೆ ಹಣ್ಣಿನ ಮಹತ್ವವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ… ಫೆಬ್ರವರಿ, ಮಾರ್ಚ್, ಎಪ್ರಿಲ್ ತಿಂಗಳು ಗಳಲ್ಲಿ ಸಿಕ್ಕುವ ಹಣ್ಣು ತಿನ್ನಲು ಯೋಗ್ಯ. ಒಂದು ಜಾತಿಯ ನೇರಳೆ ಗಾತ್ರದಲ್ಲಿ ದೊಡ್ಡ ಬೇಳೆಯುವುದು ಮೇ,ಜೂನ್ ತಿಂಗಳಲ್ಲಿ ಇದು ಗಂಟಲು ನೋವು ಉಂಟುಮಾಡುತ್ತದೆ. ನಮ್ಮಲ್ಲಿ ಇದನ್ನು ಗಂಟಲಗಳಲೆ ಅಂತ ಕರೀತಾರೆ.…
Tumblr media
View On WordPress
0 notes